ಜಗಳೂರು: ಮೂಲ ಸೌಕರ್ಯಗಳಿಂದ ವಂಚಿತವಾದ ಭರಮ ಸಮುದ್ರ ಗ್ರಾಮ
ತಾಲ್ಲೂಕಿನ ಭರಮ ಸಮುದ್ರ ಗ್ರಾಮದಲ್ಲಿ ಎಲ್ಲಾಂದರಲ್ಲಿ ಬಿದ್ದಿರುವ ಕಸದ ರಾಶಿ , ಸರಾಗವಾಗಿ ಹರಿಯದೆ ನಿಂತ ಜಾಗದಲ್ಲಿ ನಿಂತ ಚರೆಂಡಿ ನೀರು, ಮೀನುಗಳಂತೆ ಓಡಾಡುತ್ತಿರು ಸೊಳ್ಳೆಗಳು. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರುಸಿತ್ತಿರುವ ಗ್ರಾಮಸ್ಥರು. ಈ ಗ್ರಾಮದಲ್ಲಿ 800ಕ್ಕೂ ಹೆಚ್ಚು ಕುಟುಂಬ ಹೊಂದಿರುವ ಗ್ರಾಮಾವಾಗಿದ್ದು, ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಮರಿಚಿಕೆಯಾಗಿದೆ. ಸರಿಯಾದ ಚರೆಂಡಿಗಳಿಲ್ಲದೆ ಔಷಧಿ ಸಂಪಡಿಸದೇ ಅದೆಷ್ಟು ವರ್ಷ ಕಳಿದಿವಿಯೋ ಗೊತ್ತಿಲ್ಲ . ಇನ್ನೂ ಸೊಳ್ಳೆಗಳ ವಾಸ ಸ್ಥಾನವಾಗಿರುವ ಶಾಲೆಯ ಪಕ್ಕದಲ್ಲಿ ಕೂಡ ಚರೆಂಡಿ ನೀರು ನಿಂತ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಗ್ರಾಮ ಮಹಿಳೆಯರು ತಳಲು ತೋಡಿಕೊಂಡಿದ್ದಾರೆ.