ಕಂಪ್ಲಿ: ನಗರದ ಶಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ; ಪೋಷಕರ ಆಕ್ರೋಶ
Kampli, Ballari | Nov 20, 2025 ನಗರದ ಶಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ; ಪೋಷಕರ ಆಕ್ರೋಶ ಶಾಲೆಯಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷಕರಾದವರು ತಿದ್ದಿ ಬುದ್ದಿ ಹೇಳುತ್ತಾರೆ. ಒಳ್ಳೆಯ ಮಾತಿನಿಂದಲೇ ಮಕ್ಕಳನ್ನು ಸರಿದಾರಿಗೆ ತರುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕಿ ವಿದ್ಯಾರ್ಥಿಗಳ ಮೇಲೆ ರಾಕ್ಷಸಿ ವರ್ತನೆ ತೋರಿದ್ದಾರೆ. ಬಳ್ಳಾರಿ ಕಂಪ್ಲಿ ನಗರದಲ್ಲಿರುವ ಖಾಸಗಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಗೆ ಮೈಮೇಲೆ ಬಾಸುಂಡೆ ಬರುವಂತೆ ತರಗತಿಯ ಶಿಕ್ಷಕಿ ಬುಧವಾರ ಹೊಡೆದಿದ್ದು, ವಿದ್ಯಾರ್ಥಿಗೆ ಬುಧವಾರ ಸಂಜೆ 4ಗಂಟೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ವಿದ್ಯಾರ್ಥಿಯ ಪೋಷಕರು ಶಾಲೆಯ ಮುಖ್ಯ ಶಿಕ್ಷಕರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಗೆ ಕಾಲಿಗೆ ಬೆನ್ನಿಗೆ ಶಿಕ್ಷಕಿ ಬಡಿದ