ಬಳ್ಳಾರಿ: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ವೆಂಕಟೇಶ್ ಹೆಗಡೆಗೆ ನಗರದಲ್ಲಿ ಸನ್ಮಾನ, ಅಭಿನಂದನೆ
ರಾಜ್ಯಸಭಾ ಸದಸ್ಯರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಮ್ಮು ಕಾಶ್ಮೀರ ರಾಜ್ಯ ಉಸ್ತುವಾರಿಗಳು ಆಗಿರುವ ಡಾ||ಸೈಯದ್ ನಾಸೀರ್ ಹುಸೇನ್ ಅವರು ಭಾನುವಾರ ಬೆಳಿಗ್ಗೆ 11ಗಂಟೆಗೆ ತಮ್ಮ ಗೃಹ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ "ರಾಜ್ಯ ಸಹಕಾರ ರತ್ನ" ಪ್ರಶಸ್ತಿಯನ್ನು ಪಡೆದ, ಜನತಾ ಬಜಾರ್ ನಿರ್ದೇಶಕರು, ನ್ಯಾಯವಾದಿಗಳೂ ಆಗಿರುವ ವೆಂಕಟೇಶ್ ಹೆಗಡೆಯವರನ್ನು ಅಭಿನಂದಿಸಿ, ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ನಾಸಿರ್ ಹುಸೇನ್ ಅವರು, ವೆಂಕಟೇಶ್ ಹೆಗಡೆಯವರು ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಿ, ಸಹಕಾರಿ ರಂಗಕ್ಕೆ ಅತ್ಯುತ್ತಮ ಕೊಡುಗೆ ನೀಡಲಿ ಹಾಗೂ ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿ, ಪುರಸ್ಕಾರಗಳು ಸಿಗುವಂತಾಗಲಿ ಎಂದು ಶುಭ ಹಾರೈಸಿದರು.