ಹುನಗುಂದ: ಸಂಭ್ರಮದಿಂದ ಜರುಗಿದ ಹಾವರಗಿ ಗ್ರಾಮದ ಮಲ್ಲಿಕಾರ್ಜುನ ರಥೋತ್ಸವ
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಾವರಗಿ ಗ್ರಾಮದ ಆರಾಧ್ಯ ದೈವ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಅ.೨೯ ಸಾಯಂಕಾಲ ೬ ಗಂಟೆಗೆ ಜರುಗಿತು. ಮುಂಜಾನೆ ಮಲ್ಲಿಕಾರ್ಜುನ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಜರುಗಿದವು. ತಾಲೂಕಿನ ಜನತೆ ಗ್ರಾಮಕ್ಕೆ ಆಗಮಿಸಿ ದೇವರ ದರ್ಶವನ್ನು ಪಡೆದ ತಮ್ಮ ಹರಕೆಗಳನ್ನು ತೀರಿಸಿ ಭಕ್ತಿಯನ್ನು ಮೆರೆದರು. ನಂತರ ಸಾಯಂಕಾಲ ಅಪಾರ ಸಂಖ್ಯೆಯ ಭಕ್ತರು ರಥೋತ್ಸವವನ್ನು ಎಳೆದು ಸಂಭ್ರಮಿಸಿದರು. ಶಾಸಕ ವಿಜಯಾನಂದ ಕಾಶಪ್ಪನವರ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.