ದಾಂಡೇಲಿ : ಹಿಂದೂ ಸಮಾವೇಶ ಸಮಿತಿ ಸಾಯಿ ಉಪ ನಗರ ಸಾಯಿನಗರ, ಗಣೇಶನಗರ, ಬಸವೇಶ್ವರ ನಗರ, ಸುಭಾಷ್ ನಗರ, ಆಜಾದ್ ನಗರ, ವಿಜಯ ನಗರ ಮತ್ತು 14ನೇ ಬ್ಲಾಕ್ ಪ್ರದೇಶದ ವತಿಯಿಂದ ನಗರದ ಬಸವೇಶ್ವರ ನಗರದಲ್ಲಿರುವ ಶ್ರೀ ಹಾಲೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮಾವೇಶ ಕಾರ್ಯಕ್ರಮವು ಭಾನುವಾರ ರಾತ್ರಿ 8:30 ಗಂಟೆ ಸುಮಾರಿಗೆ ಸಂಪನ್ನಗೊಂಡಿತು. ಹಿಂದೂ ಸಮಾವೇಶದ ನಿಮಿತ್ತ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶೋಭಾ ಯಾತ್ರೆಯು ಗಣೇಶ ನಗರ, ಅಂಬೇವಾಡಿ, ಸುಭಾಷ ನಗರ, ಆಜಾದ್ ನಗರ, ವಿಜಯನಗರದಲ್ಲಿ ಸಂಚರಿಸಿ ಕೊನೆಯಲ್ಲಿ ಶ್ರೀ ಹಾಲೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.