ಸಾಲಿಗ್ರಾಮ: ಭೇರ್ಯ ಗ್ರಾಮದಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ; ಶಾಸಕ ಡಿ.ರವಿಶಂಕರ್ ಭಾಗಿ
ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ ಶಿವಕುಮಾರ ಸ್ವಾಮೀಜಿ ಬಳಗದಿಂದ ಶಿವಕುಮಾರ ಸ್ವಾಮೀಜಿಯವರ ಜಯಂತಿ ಆಚರಿಸಿದರು. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಿ.ರವಿಶಂಕರ್ ಭಾಗವಹಿಸಿ ಮಾತನಾಡಿದರು. ನಡೆದಾಡುವ ದೇವರು ಎಂದೇ ಭಕ್ತರ ಮನಸಿನಲ್ಲಿದ್ದ ಶ್ರೀ ಶಿವಕುಮಾರ ಸ್ವಾಮೀಜಿಯವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದರು. ಈ ಸಂದರ್ಭದಲ್ಲಿ ಅನೇಕ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.