ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಡೆಂಘಿ ನಿಯಂತ್ರಣಕ್ಕೆ ಕ್ರಮ ವಾಪಸಂದ್ರದಲ್ಲಿ ಕೂಲಿ ಕಾರ್ಮಿಕರಿಗೆ ರಕ್ತ ಪರೀಕ್ಷೇ ಸಾಮೂಹಿಕ ಆರೋಗ್ಯ ತಪಾಸಣೆ ಮತ್ತು ಜಾಗೃತಿ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡಿಂಗಿ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದು ಇಂದು ಶನಿವಾರ ಬೆಳಗ್ಗೆ 10ಗಂಟೆಗೆ ನಗರದ ವಾಪಸಂದ್ರ ಬಳಿಯ ಕೂಲಿಕಾರ್ಮಿಕರು ತೆರಳುವ ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ಜಿಲ್ಲಾ ವೈದ್ಯರ ತಂಡ ತೆರಳಿ ಕೂಲಿ ಕಾರ್ಮಿಕರಿಗೆ ಸಾಮೂಹಿಕವಾಗಿ ವಿವಿಧ ರೀತಿಯ ರಕ್ತಪರೀಕ್ಷೆಗಳು ಸೇರಿದಂತೆ ಆರೋಗ್ಯದ ತಪಾಸಣೆ ನಡೆಸಿದರು ನೂರಾರು ಸಂಖ್ಯೆಯ ಕೂಲಿಕಾರ್ಮಿಕರಿದ್ದ ಸ್ಥಳಕ್ಕೆ ವೈದ್ಯರ ತಂಡ ತೆರಳಿ ಡೆಂಗಿ ನಿಯಂತ್ರಣ ಹಾಗೂ ಸೊಳ್ಳೆಗಳ ಕಾಟದಿಂದ ಮುಕ್ತರಾಗಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಕೂಲಿ ಕಾರ್ಮಿಕರಿಗೆ ಜಾಗೃತಿ ಮೂಡಿಸಿದರು.