ನಂಜನಗೂಡು: ನಗರದಲ್ಲಿ ಜಾ.ದಳ ಜಿಲ್ಲಾಧ್ಯಕ್ಷರ ಬೆಂಬಲ ಕೋರಿದ ಬಿಜೆಪಿ ಅಭ್ಯರ್ಥಿ ಬಾಲರಾಜು
ನಂಜನಗೂಡು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಜಾ.ದಳ-ಬಿಜೆಪಿ ಮೈತ್ರಿ ಅಭ್ಯರ್ಥಿ ಎಸ್.ಬಾಲರಾಜ್ ಅವರು ಜಾ.ದಳ ಮೈಸೂರು ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ ಯವರ ನಿವಾಸಕ್ಕೆ ಆಗಮಿಸಿ ಮೈತ್ರಿ ಅಭ್ಯರ್ಥಿಯಾಗಿರುವ ತಮ್ಮ ಗೆಲುವಿಗಾಗಿ ಸಹಕರಿಸುವಂತೆ ಮನವಿ ಮಾಡಿದರು. ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಸೇರಿದಂತೆ ತಾಲ್ಲೂಕಿನ ಜಾ.ದಳ ಮುಖಂಡರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಜನತಾದಳ ಜಿಲ್ಲಾಧ್ಯಕ್ಷರ ನಿವಾಸಕ್ಕೆ ತೆರಳಿ ಬೆಂಬಲವನ್ನು ಕೋರಿದರು.