ಜಗಳೂರು: ಪಟ್ಟಣದ ಕೆರೆ ಏರಿ ಮೇಲೆ ಆಟೊ ಹಾಗೂ ಬೈಕ್ ನಡುವೆ ಅಪಘಾತ; ಸವಾರನಿಗೆ ಗಂಭೀರ ಗಾಯ
ಆಟೊ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ತೀವ್ರ ಗಾಯಗೊಂಡಿರುವ ಘಟನೆ ಜಗಳೂರು ಪಟ್ಟಣದ ಕೆರೆ ಏರಿ ಮೇಲೆ ಶುಕ್ರವಾರ ಜರುಗಿದೆ. ಪಟ್ಟಣದ ಕಡೆಯಿಂದ ಗಾನಗಟ್ಟೆ ಗ್ರಾಮದ ಕಡೆಗೆ ತೆರಳುತಿದ್ದ ಬೈಕ್ ಸವಾರನಿಗೆ ಹೊಸಕೆರೆ ಮಾರ್ಗವಾಗಿ ಬಂದ ಆಟೋ ಗುದ್ದಿದ ಪರಿಣಾಮ ಸವಾರ ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಸ್ಥಳೀಯರು ರಕ್ಷಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.