ಬಳ್ಳಾರಿ: ಜೀನ್ಸ್ ಘಟಕಗಳ ಮೇಲೆ ಕಾಂಗ್ರೆಸ್ ಸರಕಾರದ ದೌರ್ಜನ್ಯ: ನಗರದಲ್ಲಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಆರೋಪ
ಜೀನ್ಸ್ ಘಟಕಗಳ ಮೇಲೆ ಕಾಂಗ್ರೆಸ್ ದೌರ್ಜನ್ಯ ನಡೆದಿದೆ. ಹತ್ತಾರು ದಶಕಗಳಿಂದ ಈ ಉದ್ದಿಮೆ ಸಾವಿರಾರು ಜನರ ಬದುಕಾಗಿ ಬೆಳಿದತ್ತು. ಇತಂಹ ಉದ್ಯಮಕ್ಕೆ ರಾತ್ರೋ ರಾತ್ರಿ ಬೀಗ ಹಾಕಿದ್ದು ಖಂಡನೀಯ ಎಂದು ನಗರದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಆರೋಪಿಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ 11ಗಂಟೆಗೆ ಸುದ್ದಿಗೋಷ್ಟಿ ನಡೆಸಿದ ಅವರು ನಿನ್ನೆ ಈ ಸಮಸ್ಯೆಗೆ ಒಂದಿಷ್ಟು ಪರಿಹಾರ ಸೂಚಿಸಿರುವುದು ಸ್ವಾಗತ. ಆದರೆ ಬಳ್ಳಾರಿಯನ್ನು ಜೀನ್ಸ್ ಹಬ್ಬ ಮಾಡುವುದಾಗಿ ಹೇಳಿ ಎರೆಡು ವರೆ ವರ್ಷ ಕಳೆದಿದೆ. ಆದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಮೀನು ಖರೀದಿಯಾಗಿಲ್ಲ. ಖರೀದಿಮಾಡಿದ ಜಮೀನನ್ನು ಉದ್ದಿಮೆದಾರರಿಗೆ ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸರಿಯಲ್ಲ.