ಸರಗೂರು: ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಮಾಡ್ರಳ್ಳಿ ಬಳಿ ವ್ಯಕ್ತಿ ಸಾವು
ಕೆಎಸ್ ಆರ್ ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಟಿ ನರಸೀಪುರ ತಾಲೂಕು ಮಾಡ್ರಳ್ಳಿ ಗೇಟ್ ಬಳಿ ನಡೆದಿದೆ.ಮಾಡ್ರಳ್ಳಿ ಗ್ರಾಮದ ಕುಮಾರ್ (37) ಮೃತ ದುರ್ದೈವಿ.ಹಸುಗಳನ್ನ ಮೇಯಿಸಿಕೊಂಡು ರಸ್ತೆ ಬದಿ ಬರುತ್ತಿದ್ದ ಕುಮಾರ್ ಗೆ ಸರ್ಕಾರಿ ಬಸ್ ಢಿಕ್ಕಿ ಹೊಡೆದಿದೆ.ಕುಮಾರ್ ಸ್ಥಳದಲ್ಕೇ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ಟಿ.ನರಸೀಪುರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.ಪರಿಹಾರಕ್ಕಾಗಿ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.ಬಸ್ ತೆರುವುಗೊಳಿಸಲು ಅಡ್ಡಿಪಡಿಸಿದ್ದಾರೆ.