ಬೆಂಗಳೂರಿನಲ್ಲಿ ವಾಹನವನ್ನು ಅಕ್ರಮವಾಗಿ ಮಾರ್ಪಾಡು ಮಾಡಿದ ಕೇರಳ ಮೂಲದ ವಿದ್ಯಾರ್ಥಿಯೊಬ್ಬನಿಗೆ 70 ಸಾವಿರ ರೂಪಾಯಿ ಮೌಲ್ಯದ ಕಾರಿಗೆ 1.11 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಜನವರಿ 2ರಂದು ಹೆಣ್ಣೂರು ರಸ್ತೆ ಬಳಿ ಈ ಘಟನೆ ನಡೆದಿದ್ದು, ಕಾರಿನಿಂದ ಬೆಂಕಿ ಕಿಡಿ ಹಾಗೂ ದೊಡ್ಡ ಶಬ್ದ ಬರುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದಾರಿಹೋಕರೊಬ್ಬರು ನೀಡಿದ ದೂರಿನ ಮೇರೆಗೆ ಸಂಚಾರಿ ಪೊಲೀಸರು ತನಿಖೆ ನಡೆಸಿ, ವಾಹನ ಹಾಗೂ ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಯು ರಾಜಕೀಯ ಪ್ರಭಾವ ಬಳಸಿ ಕಡಿಮೆ ದಂಡ ಹಾಕಿ ಬಿಟ್ಟು ಕಳಿಸುವಂತೆ ಪೊಲೀಸರ ಮೇಲೆ ಒತ್ತಡ ಹಾಕಿದ್ದ ಎನ್ನಲಾಗಿದೆ.