ಮಳವಳ್ಳಿ : ಮಳವಳ್ಳಿ ಪಟ್ಟಣದಲ್ಲಿ ಡಿಸೆಂಬರ್ 3ನೇ ವಾರ ಹಮ್ಮಿಕೊಂಡಿರುವ ಶ್ರೀ ಶಿವರಾತ್ರೀ ಶ್ವರ ಜಗದ್ಗುರುಗಳ 1066ನೇ ಜಯಂತಿ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಬರುತ್ತಿರುವುದು ನಮ್ಮ ತಾಲೂಕಿಗೆ ಸೌಭಾಗ್ಯ ಎಂದಿರುವ ಗವಿಮಠದ ಶ್ರೀ ಷಡಕ್ಷರ ಸ್ವಾಮೀಜಿ ಒಂದು ವಾರಗಳ ಕಾಲ ನಡೆಯುವ ಆದಿಗುರು ಶಿವರಾತ್ರಿ ಜಗದ್ಗುರು ಗಳ ಜಯಂತೋತ್ಸವದಲ್ಲಿ ತಾಲ್ಲೂಕಿನ ಎಲ್ಲಾ ಜನತೆ ಅಪಾರ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿದರು. ಜಯಂತೋತ್ಸವದ ಪ್ರಚಾರ ರಥವು ಗವಿಮಠದಿಂದ ಹೊರಟು ಡಿ. ಹಲಸಹಳ್ಳಿ, ಬಾಣಸಮುದ್ರ, ಪುರುದೊಡ್ಡಿ, ತೊರೆ ಕಾಡನಹಳ್ಳಿ ಮಾರ್ಗವಾಗಿ ಹಲಗೂರು ಗ್ರಾಮಕ್ಕೆ ಬುಧವಾರ ಸಾಯಂಕಾಲ 5.30 ರ ಸಮಯ ದಲ್ಲಿ ಬಂದಾಗ ಎಲ್ಲಾ ವರ್ಗದ ಭಕ್ತಾದಿಗಳು ಸೇರಿ ರಥವನ್ನು ಸ್ವಾಗತಿಸಿದರು.