ಹೊಳಲ್ಕೆರೆ: ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಅನಾಮಧೇಯ ವ್ಯಕ್ತಿ ಸಾವು, ಗುರುತು ಪತ್ತೆಗೆ ಪೊಲೀಸರು ಪ್ರಕಟಣೆ
ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಅನಾಮಧೇಯ ವ್ಯಕ್ತಿ ಮೃತಪಟ್ಟಿದ್ದು ಗುರುತು ಪತ್ತೆಗೆ ಪೊಲೀಸರು ಪ್ರಕಟಣೆ ನೀಡಿದ್ದಾರೆ. ಇನ್ನೂ ಶುಕ್ರವಾರ ಸಂಜೆ 5 ಗಂಟೆಗೆ ಈ ಬಗ್ಗೆ ಇಲಾಖೆ ಪ್ರಕಟಣೆ ನೀಡಿದೆ. ಇನ್ನೂ ಸುಮಾರು 35-40 ವರ್ಷದ ಅನಾಮಧೇಯ ವ್ಯಕ್ತಿ ಮೃತಪಟ್ಟಿದ್ದು, ಈ ಕುರಿತು ಜ.09 ರಂದು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜ.6 ರಂದು ಹೊಳಲ್ಕೆರೆ ಸರ್ಕಾರಿ ಅಸ್ಪತ್ರೆಗೆ ಒಬ್ಬ ಅನಾಮಧೇಯ ವ್ಯಕ್ತಿ ಅನಾರೋಗ್ಯದಿಂದ ಒಳ ರೋಗಿಯಾಗಿ ದಾಖಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.