ಜಗಳೂರು: ವಿಶೇಷ ಚೇತನರ ಬೇಡಿಕೆಗಳಿಗೆ ತಕ್ಕಂತೆ ಕ್ರಿಯಾಯೋಜನೆ ರೂಪಿಸಿ: ಹೊಸಕೆರೆ ಗ್ರಾ.ಪಂ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ
ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಬುಧವಾರ ವಿಕಲಚೇತನರ ಸಮನ್ವಯ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಭಾಗಿ ಆಗಿ ಮಾತನಾಡಿದ ವಿಕಲಚೇತನರ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ, ವಿಶೇಷ ಚೇತನರಿಗೆ ಮೀಸಲಿರಿಸಿದ ಶೇ. 5ರ ಮೀಸಲಾತಿ ಅನುದಾನವನ್ನು ವಿಕಲಚೇತನರ ಶ್ರೇಯೋಭಿವೃದ್ದಿಗೆ ವಿನಿಯೋಗವಾಬೇಕು ಎಂದು ಹೇಳಿದರು. ಹೊಸಕೆರೆ ಗ್ರಾ.ಪಂ ರ್ಯಾಂಪ್ ಮತ್ತು ರೈಲಿಂಗ್ಸ್ ವ್ಯವಸ್ಥೆ ಇಲ್ಲದೇ ವಿಕಲಚೇತನರು ಮತ್ತು ವಯೋವೃದ್ಧ ಫಲಾನುಭವಿಗಳು ಕಚೇರಿಗೆ ಬರಲು ಸಮಸ್ಯೆ ಆಗುತ್ತಿದೆ ಎಂದರು.