ಕಡೂರು: ತಾಯಿಗಾಗಿ ಹಂಬಲಿಸುತ್ತಿದೆ 5 ತಿಂಗಳ ಕಂದಮ್ಮ, ಕಡೂರಿನಲ್ಲಿ ಕರುಣಾಜನಕ ಕಥೆ..!. ಮಗುವಿನ ತಾಯಿಗೆ ಏನಾಯ್ತು..?.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ನಡೆದ ಘಟನೆ ಒಂದು ಕುಟುಂಬವನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ. ಗ್ರಾಮದ ವಿಜಯ್ ಕುಮಾರ್ ಅವರ ಪತ್ನಿ ಭಾರತಿ ಮಾನಸಿಕ ಅಸ್ವಸ್ಥೆ ಕಳೆದ ಸೆಪ್ಟೆಂಬರ್ 4ರಂದು ಅಜ್ಜಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಮನೆಯಿಂದ ಹೋಗಿದ್ದು ಆದರೆ ನಂತರದಿಂದಲೇ ಅವರ ಸುಳಿವು ಸಿಕ್ಕಿಲ್ಲ.ಮನೆಯ ಮುದ್ದಾದ ಮಗು ತಾಯಿಯ ದಯೆ-ಮಮತೆಯಿಲ್ಲದೆ ನಿರಂತರ ಗೋಳಾಡುತ್ತಿದ್ದು, ಕುಟುಂಬದವರ ಕಣ್ಣೀರನ್ನು ತರಿಸುತ್ತಿದೆ. ನಿರಂತರ ಹುಡುಕಾಟದ ಬಳಿಕವೂ ಪತ್ತೆಯಾಗದ ಕಾರಣ, ಪತಿ ವಿಜಯ್ ಕುಮಾರ್ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತ್ನಿ ಪತ್ತೆಯಾಗಲೆಂದು ಕಾತರದಿಂದ ಕಾದು ಕುಳಿತಿದ್ದಾರೆ. ತಾಯಿ ಮಡಿಲಿಲ್ಲದೆ ಮಗು ಕಣ್ಣೀರು ಹಾಕುತ್ತಿರುವ ದೃಶ್ಯ ಗ್ರಾಮಸ್ಥರ ಹೃದಯವ