ಕೃಷ್ಣರಾಜನಗರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಅಲ್ಫಾ ಕಾಲೇಜಿನ ಮೂವರು ತಾಲ್ಲೂಕಿಗೆ ಪ್ರಥಮ, ಕಾಲೇಜು ಸಿಬ್ಬಂದಿಯಿಂದ ಅಭಿನಂದನೆ
ಕೃಷ್ಣರಾಜನಗರ ಪಟ್ಟಣದ ಆಲ್ಫಾ ಪಿಯು ಕಾಲೇಜಿನ ಮೂವರು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು, ಸಂಸ್ಥೆಯ ಅಧ್ಯಕ್ಷರು ಅಭಿನಂದಿಸಿದರು. ವಿಜ್ಞಾನ ವಿಭಾಗದಲ್ಲಿ ಪವನ್ ಕೆ.ಸಿ 579, ಗಾನವಿ ಕೆ.ಎಸ್ 579, ವಾಣಿಜ್ಯ ವಿಭಾಗದಲ್ಲಿ ನಾಜೀಯಾ ಖಾನಂ 572 ಅಂಕ ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.