ಬೆಂಗಳೂರು ದಕ್ಷಿಣ: ಥಿನ್ ವೈಟ್ ಟಾಪಿಂಗ್ ವಿನ್ಯಾಸಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪ್ರತಿಷ್ಠಿತ ಐಸಿಐ ಅಲ್ಟ್ರಾಟೆಕ್ ಪ್ರಶಸ್ತಿ
ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ ಅಲ್ಟ್ರಾಟೆಕ್ ಪ್ರಶಸ್ತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಭಾಜನವಾಗಿದೆ.ಬೆಂಗಳೂರು ನಗರದ ಕೊರಮಂಗಲದ 1ನೇ ಕ್ರಾಸ್ ಎಂಪೈರ್ ರಸ್ತೆ ಮತ್ತು 7ನೇ ಕ್ರಾಸ್ ರಸ್ತೆಗಳಲ್ಲಿ ಅನುಷ್ಠಾನಗೊಳಿಸಲಾದ ಥಿನ್ ವೈಟ್ ಟಾಪಿಂಗ್ ಕಾಮಗಾರಿ ವಿನ್ಯಾಸ ಮತ್ತು ಅನುಷ್ಠಾನಕ್ಕೆ ಈ ಗೌರವ ಸಂದಿದೆ. ಈ ಕುರಿತು ಸೆಪ್ಟೆಂಬರ್ 28ರಂದು 1 ಗಂಟೆಗೆ ಮಾಹಿತಿ ನೀಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ, 'ಕೊರಮಂಗಲದ ಒಳ ವರ್ತುಲ ರಸ್ತೆಯ 1ನೇ ಕ್ರಾಸ್ ಎಂಪೈರ್ ರಸ್ತೆಯಿಂದ ಗಣಪತಿ ದೇವಸ್ಥಾನದವರೆಗೆ ಹಾಗೂ ಕೋರಮಂಗಲ 7ನೇ ಕ್ರಾಸ್ ಬಿಡಿಎ ಕಾಂಪ್ಲೆಕ್ಸ್ ನಿಂದ ವಿಪ್ರೋ ಪಾರ್ಕ್ ಸಿಗ್ನಲ್ ವರೆಗೆ ಹೊಸ ವಿನ್ಯಾಸದಲ್ಲಿ ದಪ್ಪದ ವೈಟ್ ಟಾಪಿಂಗ್ ಅನ್ನ 2023ರಲ್ಲಿ ಅನುಷ್ಠಾನಗೊಳಿಸಲಾಗಿತ್ತು' ಎಂದು ತಿಳಿಸಿದೆ.