ಕೋಲಾರ: ಮಾಹಿತಿ ಹಕ್ಕು ಜನಶಕ್ತಿ — ಪಾರದರ್ಶಕ ಆಡಳಿತಕ್ಕೆ ಅರಿವು ಅಗತ್ಯ: ಹೇಮಂತ್ ನಾಗರಾಜ್
Kolar, Kolar | Nov 29, 2025 ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಅಧ್ಯಕ್ಷ ಹೇಮಂತ್ ನಾಗರಾಜ್ ಹೇಳಿದರು. ಪತ್ರಕರ್ತರ ಭವನದಲ್ಲಿ ನಡೆದ ಕೋಲಾರ ಜಿಲ್ಲಾ ಘಟಕದ ಮೊದಲ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಹೆಚ್ಚಿಸುವುದು ಹಾಗೂ ಸಾರ್ವಜನಿಕ ದಾಖಲೆಗಳನ್ನು ಜನರಿಗೆ ಲಭ್ಯಗೊಳಿಸುವುದು ಆರ್‌ಟಿಐ ಕಾಯ್ದೆಯ ಉದ್ದೇಶ ಎಂದರು. ಮಾಹಿತಿ ಅಧ್ಯಯನ ಕೇಂದ್ರದ ವೀರೇಶ್ ಬೆಳ್ಳೂರು, ಮಾಹಿತಿಯ ದುರುಪಯೋಗ ತಪ್ಪಿಸಿ ಸಮಾಜದ ಹಿತಕ್ಕಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಅಧ್ಯಕ್ಷ ಸಿ. ಮೋಹನ್ ಕುಮಾರ್, ಮಾಹಿತಿ ನೀಡಲು ನಿರಾಕರಿಸುವ ಅಧಿಕಾರಿಗಳ ವಿರುದ್ಧ ದಂಡ ಮತ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರ