ಮೈಸೂರು: ದಸರಾ ಆನೆಗಳ ಅಂತಿಮ ಹಂತದ ತೂಕ ಪರೀಕ್ಷೆ: ಭೀಮನೆ ಅತ್ಯಧಿಕ ತೂಕ
Mysuru, Mysuru | Oct 1, 2025 ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ದಸರಾಗೆ ಬಂದಿರುವ ಗಜಪಡೆಗೆ ಕೊನೆಯ ಹಂತದ ತೂಕ ಪರೀಕ್ಷೆಯನ್ನು ಇಂದು ಸಂಜೆ ನಡೆಸಲಾಯಿತು. ನಗರದ ಧನ್ವಂತರಿ ರಸ್ತೆಯ ವೇ ಬ್ರಿಡ್ಜ್ ನಲ್ಲಿ ಎಲ್ಲಾ ಆನೆಗಳ ತೂಕ ಹಾಕಲಾಯಿತು. ಆನೆಗಳು ಕಾಡಿನಿಂದ ಬಂದಾಗ ಇದ್ದ ತೂಕಕ್ಕೂ ಈಗಿನ ತೂಕಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ. ಅಂಭಾರಿ ಹೊರುವ ಆನೆ ಅಭಿಮನ್ಯು :- 5635 ಕೆಜಿ, ಲಕ್ಷ್ಮಿ :- 3960 ಕೆಜಿ, ಮಹೇಂದ್ರ :- 5365 ಕೆಜಿ,