ರಾಯಚೂರು: ದಲಿತ ಸಂಘಟನೆ, ರೈತ ಸಂಘಟನೆ, ಮಹಿಳಾ ಸಂಘಟನೆ ಹಾಗೂ ಮಾನವ ಹಕ್ಕುಗಳ ಸಂಘಟನೆಗಳಿಂದ ನ18ರಂದು ಸಂವಿಧಾನ ಜಾಗೃತಿ ಜಾಥಾ
ದಲಿತ ಸಂಘಟನೆ, ರೈತ ಸಂಘಟನೆ, ಮಹಿಳಾ ಸಂಘಟನೆ ಹಾಗೂ ಮಾನವ ಹಕ್ಕುಗಳ ಸಂಘಟನೆ ಸೇರಿದಂತೆ 30ಕ್ಕೂ ಹೆಚ್ಚು ಸಂಘಟನೆಗಳಿಂದ ನವೆಂಬರ್ 18ರಂದು ಸಂವಿಧಾನ ಸಂರಕ್ಷಣ ಪಡೆಯಿಂದ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಎಂ ಆರ್ ಬೇರಿ ತಿಳಿಸಿದರು. ಅವರು ರವಿವಾರದಂದು ಬೆಳಿಗ್ಗೆ 11.30ರ ಸುಮಾರಿಗೆ ನಗರದ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದರು. ನಗರದ ಕರ್ನಾಟಕ ಸಂಘದಿಂದ ಜಾಗೃತಿ ಜಾತ ಆರಂಭವಾಗಿ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಸಮರೋಪಗೊಳ್ಳಲಿದೆ ಎಂದು ತಿಳಿಸಿದರು..