ಕೃಷ್ಣರಾಜನಗರ: ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಮಹದೇಶ್ವರ ಸ್ವಾಮಿ ಸಮಿತಿಯಿಂದ ವಿಶೇಷ ಪೂಜೆ, ಅನ್ನದಾಸೋಹ
ಕೃಷ್ಣರಾಜನಗರ ತಾಲ್ಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಮಲೈ ಮಹದೇಶ್ವರ ಸ್ವಾಮಿ ಸಮಿತಿಯಿಂದ ಮಂಗಳವಾರ ಮಾದೇಶ್ವರನಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ 500ಕ್ಕೂ ಹೆಚ್ಚು ಭಕ್ತಾದಿಗಳು ಮಹದೇಶ್ವರ ಬೆಟ್ಟಕ್ಕೆ ತೆರಳಿ 5000 ಜನರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಮಾಡಿದರು.