ಮೈಸೂರು: ನಾಳೆ ಜರುಗಲಿರುವ ವಿಜಯದಶಮಿ ಜಂಬೂಸವಾರಿಯ ಅಂತಿಮ ಸಿದ್ದತೆಗಳನ್ನು ಪರಿಶೀಲಿಸಿದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ
Mysuru, Mysuru | Oct 1, 2025 ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಅರಮನೆಯ ಆವರಣಕ್ಕೆ ಭೇಟಿ ನೀಡಿ ನಾಳೆ ಜರುಗಲಿರುವ ವಿಜಯದಶಮಿ ಜಂಬೂಸವಾರಿಯ ಅಂತಿಮ ಸಿದ್ದತೆಗಳನ್ನು ಪರಿಶೀಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಷೀಫ್, ಡಿಸಿಪಿ ಸುಂದರ್ ರಾಜು, ಬಿಂದುಮಣಿ ಸೇರಿದಂತೆ ಮುಂತಾದವರು ಇದ್ದರು.