ಸಾರಿಗೆ ಇಲಾಖೆ ಬಸ್ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಮಹಾಗಾಂವ ಕ್ರಾಸ್ ನಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ. ಮಹಾಗಾಂವ ಕ್ರಾಸ್ ನಿವಾಸಿ ಬಸಣ್ಣ ಹಣಮಂತಪ್ಪ ಭಜಂತ್ರಿ (70) ಮೃತ ವ್ಯೆಕ್ತಿ ಎಂದು ಗುರುತಿಸಲಾಗಿದೆ. ಹೆದ್ದಾರಿ ದಾಟುವಾಗ ಕಲಬುರ್ಗಿಯಿಂದ ಭಾಲ್ಕಿ ತೆರಳುತ್ತಿದ್ದ ಭಾಲ್ಕಿ-ಕಲಬುರಗಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಬಸಣ್ಣ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಪಿಎಸ್ಐ ಚಿದಾನಂದ ಚಿತ್ತಕೋಟೆ, ಸಿಬ್ಬಂಧಿ ಕಿಶನ ಜಾಧವ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.