ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಒಂದಾದ ಮೊಹರಂ ಹಬ್ಬವನ್ನು ಚಿಕ್ಕಬಳ್ಳಾಪುರದಲ್ಲಿ ಸಂಭ್ರಮ ಶುದ್ಧ ಭಕ್ತಿಯಿಂದ ಆಚರಿಸಲಾಯಿತು,ಹಬ್ಬದ ಅಂಗವಾಗಿ ಇಂದು ನಗರದ ಟೌನ್ ಹಾಲ್ ಸರ್ಕಲ್ನಲ್ಲಿ ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಶರಬತ್ (ಪಾಣಕ)ವಿತರಣೆ ಕಾರ್ಯಕ್ರಮ ನಡೆಯಿತು.ಮೊಹರಂ ತಿಂಗಳ ಹತ್ತನೇ ದಿನದಂದು ಸಾಂಪ್ರದಾಯಿಕವಾಗಿ ಪಂಜೆ ಮೆರವಣಿಗೆ ಚಿಕ್ಕಬಳ್ಳಾಪುರದಲ್ಲಿ ಕೂಡ ನಡೆಯಿತು ಇದರಲ್ಲಿ ಭಾಗವಹಿಸುವವರಿಗೆ ಅಲ್ಲದೆ ಸಮಸ್ತರಿಗೂ ಕೂಡ ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಶರಬತ್ ವಿತರಣೆ ನಡೆಯಿತು.