ರಾಯಚೂರು: ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ಜಲಾಶಯದ ಸಭೆಯಲ್ಲಿ 2ನೇ ಬೆಳೆಗೆ ನೀರು ಕೋಡಲು ಶಾಸಕ ಡಾ.ಎಸ್ ಶಿವರಾಜ ಒತ್ತಾಯ
ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ಜಲಾಶಯ ಮತ್ತು ವಿಜಯನಗರ ಕಾಲುವೆ ಕುರಿತಾದ ನೀರಾವರಿ ಸಲಹಾ ಸಮಿತಿಯಲ್ಲಿ ಎರಡನೇ ಬೆಳೆಗೆ ನೀರು ಬಿಡುವಂತೆ ರಾಯಚೂರು ನಗರ ಶಾಸಕ ಡಾ.ಎಸ್ ಶಿವರಾಜ ಪಾಟೀಲ ಒತ್ತಾಯಿಸಿದ್ದಾರೆ ಈ ಭಾಗದ ತುಂಗಭದ್ರಾ ಅಚ್ಚುಕಟ್ಟಿನ ರೈತರ ಹಿಂಗಾರು ಬೆಳೆಗೆ ನೀರು ಹರಿಸಿ ರೈತರ ಹಿತ ಕಾಪಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಶಾಸಕರ ಆಪ್ತಸಹಾಯಕರು ನವೆಂಬರ್ 16 ರಂದು ಸಂಜೆ 7-00 ಗಂಟೆಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ