ಶಿರಸಿ: ದಾಸನಕೊಪ್ಪದಲ್ಲಿ ಬಂಗಾರದ ಅಂಗಡಿ ಕಳ್ಳತನ
ಶಿರಸಿ : ದಾಸನಕೊಪ್ಪದಲ್ಲಿ ಬಂಗಾರದ ಅಂಗಡಿ ಮತ್ತು ಮನೆ ಕಳ್ಳತನವಾಗಿದ್ದು, ಲಕ್ಷಾಂತರ ಬೆಲೆಯ ಚಿನ್ನ ಮತ್ತು ಬೆಳ್ಳಿ ಆಭರಣಗಳು ಕಳುವಾಗಿದೆ. ದಾಸನಕೊಪ್ಪದಲ್ಲಿ ಜೀವನ ಚಂದ್ರಹಾಸ ಶೇಟ್ ಇವರಿಗೆ ಸೇರಿದ ವಿಘ್ನೇಶ್ವರ ಹೆಸರಿನ ಬಂಗಾರದ ಅಂಗಡಿಯಲ್ಲಿ ಕಳ್ಳತನ ಎಸಗಿರುವ ಕಳ್ಳರು ಕೌಂಟರನಲ್ಲಿಡಲಾಗಿದ್ದ ಸುಮಾರು 1.20 ಲಕ್ಷ ರೂ ಬೆಲೆಯ ಬಂಗಾರದ ಮೂಗು ಬೊಟ್ಟು,ಬೆಳ್ಳಿಯ ಆಭರಣಗಳಾದ 18 ಸಾವಿರ ರೂ ಬೆಲೆಯ 200 ಗ್ರಾಂ ಕಾಲು ಗುಂಡು,ಸುಮಾರು 13,500 ರೂ ಬೆಲೆಯ 150 ಗ್ರಾಂ ಕಾಲು ಪಿಲ್ಲಿ,ಸುಮಾರು 40,500 ರೂ ಬೆಲೆಯ 450 ಗ್ರಾಂ ಕಾಲು ಸುತ್ತು,ಸುಮಾರು 45 ಸಾವಿರ ರೂ ಬೆಲೆಯ 750 ಗ್ರಾಂ ಹಳೆ ಬೆಳ್ಳಿಯ ಆಭರಣ,ಸುಮಾರು 1.17 ಲಕ್ಷ ರೂ ಬೆಲೆಯ 1.55 ಕೆ.ಜಿ.ಬೆಳ್ಳಿ ಆಭರಣ ಕದ್ದೊಯ್ದಿದ್ದಾರೆ.