ಚಿಂಚೊಳಿ ತಾಲೂಕಿನಲ್ಲಿ ಇರುವ ಕೆಳದಂಡೆ ಮುಲ್ಲಾಮಾರಿ ಕೆರೆ ಹಾಗೂ ಸಣ್ಣ ನಿರಾವಾರಿ ಕೆರೆಗಳು, ಜೊತೆಗೆ ಚಂದ್ರಂಪಳ್ಳಿ ಜಲಾಶಯದ ಪ್ರಮುಖ ಕಾಲುವೆಗಳ ತುರ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಶೆನಿವಾರ 2 ಗಂಟೆಗೆ ರೈತರು ಮತ್ತು ಸ್ಥಳೀಯರು ತಾಲ್ಲೂಕು ಪಂಚಾಯತ ಕಚೇರಿ ಮುಂದೆ ಧರಣಿ ನಡೆಸಿದರು. ಕಾಲುವೆಗಳಲ್ಲಿ ಹುಳುತೆಗೆಯುವುದು, ಝಂಗ್ ಹಿಡಿದ ಗೆಟ್ಗಳ ರಿಪೇರಿ ಸೇರಿದಂತೆ ನೀರಾವರಿ ಸೌಲಭ್ಯ ಸುಧಾರಣೆಗಾಗಿ ಚಳಿಗಾಲದ ಬೆಳಗಾವಿ ಅಧಿವೇಶನದಲ್ಲೇ ಅಗತ್ಯವಾದ ಅನುದಾನ ಮಂಜೂರು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು..