ಮೆಣಸಿನಕಾಯಿ ಬೆಳೆಯ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದಿರುವುದನ್ನು ಬಳ್ಳಾರಿಯಲ್ಲಿ ಅಬಕಾರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.ಬಳ್ಳಾರಿ ತಾಲೂಕಿನ ಗೋಟೂರು ಗ್ರಾಮದ ಜಮೀನೊಂದರಲ್ಲಿ ಮೆಣಸಿನಕಾಯಿ ಫಸಲಿನ ನಡುವೆ ಮತ್ತೇರಿಸುವ ಗಾಂಜಾ ಬೆಳೆದಿರುವುದು ಕಂಡು ಬಂದಿದೆ. ಖಚಿತ ಮಾಹಿತಿ ಮೇರೆಗೆ, ಗೋಟೂರು ಗ್ರಾಮದಲ್ಲಿ ಅಬಕಾರಿ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ಮೆಣಸಿನಕಾಯಿ ಫಸಲಿನ ಮಧ್ಯೆ ಬೆಳೆದಿದ್ದ 6 ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಾರ್ಯಾಚರಣೆ ವೇಳೆ 44ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದು, ಇವು ಸುಮಾರು 5ರಿಂದ 6 ಅಡಿ ಎತ್ತರವಿರೋ ಹೊಂದಿವೆ. ಅಬಕಾರಿ ಪೊಲೀಸರು ದಾಳಿ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.