ಜಗಳೂರು: ತಕ್ಕಡಿ ಸರಿಯಿದ್ದರೆ ವ್ಯವಹಾರ, ದಂಪತಿ ಸರಿಯಿದ್ದರೆ ಸಂಸಾರ: ಪಟ್ಟಣದಲ್ಲಿ ಶಾಸಕ ಬಿ.ದೇವೇಂದ್ರಪ್ಪ
ಪ್ರೇರಣಾ ಸಮಾಜ ಸೇವಾ ಸಂಸ್ಥೆ , ಅಲ್ ಫಾತೀಮಾ ಸಂಸ್ಥೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇವರ ಸಹಾಯದಿಂದ ಜಗಳೂರು ಪಟ್ಟಣದ ಪ್ರೇರಣಾ ಚರ್ಚ್ ಆವರಣದಲ್ಲಿ ಮಂಗಳವಾರದಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜರುಗಿತು. ಕಾರ್ಯಕ್ರಮವನ್ನು ಶಾಸಕ ಬಿ.ದೇವೇಂದ್ರಪ್ಪ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಹೆಣ್ಣಿಗೆ ವಿಶೇಷವಾದ ಗೌರವವಿದೆ, ಯಶಸ್ವಿ ಪುರುಷನ ಹಿಂದೆ ಮಹಿಳೆ ಪಾತ್ರ ಎಷ್ಟೋ, ಅದೇ ರೀತಿ ಯಶಸ್ವಿ ಮಹಿಳೆಯ ಹಿಂದೆ ಪತಿಯ ಬೆಂಬಲವೂ ಇರಬೇಕು, ತಕ್ಕಡಿ ಸರಿಯಿದ್ದರೆ ವ್ಯವಹಾರ, ದಂಪತಿ ಸರಿಯಿದ್ದರೆ ಸಂಸಾರ ಎಂದು ಹೇಳಿದರು.