ಬಳ್ಳಾರಿಯ ಹೊರವಲಯದ ಪಿ. ಡಿ ಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡಿತರ ಅಕ್ಕಿಯ ಲಾರಿಯನ್ನು ಗ್ರಾಮೀಣ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಮನೂರಿ ಮತ್ತು ಇತರರು ಈ ಪಡಿತರ ಅಕ್ಕಿಯನ್ನು ರಾಯಪುರಕ್ಕೆ ಸಾಗಾಣೆ ಮಾಡುತ್ತಿದ್ದವರನ್ನು ವಿರುದ್ಧ ಪ್ರಕರಣ ದಾಖಲಾಗಿದೆ. 350 ಕ್ವಿಂಟಲ್ ಪಡಿತರ ಅಕ್ಕಿ ಲಾರಿ ಮಾಲೀಕು ಮತ್ತು ಸಿಬ್ಬಂದಿಗಳು ವಶಪಡಿಸಿಕೊಂಡದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಉದಯ ರವಿ, ಪೋಲಿಸ್ ಸಿಬ್ಬಂದಿಗಳಾದ ಬೀರಪ್ಪ, ರಮೇಶ್, ಶ್ರೀನಿವಾಸ್ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ ಎಂದು ಸೋಮವಾರ ಬೆಳಿಗ್ಗೆ 9ಗಂಟೆಗೆ ಮಾಹಿತಿ ನೀಡಿದ್ದಾರೆ.