ದಾಂಡೇಲಿ : ಮಕರ ಸಂಕ್ರಮಣದಂದು ದಾಂಡೇಲಿಯ ಮೌಳಂಗಿ ಸಂಗಮದ ಬಳಿ ನದಿಯಲ್ಲಿ ಮುಳುಗಿ ದುರ್ಘಟನೆಯಲ್ಲಿ ಮೃತಪಟ್ಟ ಗಾಂಧಿನಗರದ ಯುವಕ ನವಾಜ್ ಶಬ್ಬೀರ್ ನಾಯ್ಕ ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯವರು ಸೂಕ್ತ ಪರಿಹಾರವನ್ನು ನೀಡಬೇಕೆಂದು ದಾಂಡೇಲಿಯ ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರರಾದ ದಾದಾಪೀರ್ ನದಿಮುಲ್ಲಾ ಅವರು ಆಗ್ರಹಿಸಿದ್ದಾರೆ. ಅವರು ಭಾನುವಾರ ಮಧ್ಯಾಹ್ನ 01 ಗಂಟೆ ಸುಮಾರಿಗೆ ಮೃತ ನವಾಜ್ ಶಬ್ಬೀರ್ ನಾಯ್ಕ ಅವರ ಗಾಂಧಿನಗರದಲ್ಲಿರುವ ಮನೆಯ ಮುಂಭಾಗದಲ್ಲಿ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.