ಬಳ್ಳಾರಿ ನಗರದ ಹಜರತ್ ಮಕದುಮ್ ಜಾನಿಬಾಬಾ ದರ್ಗಾದ ಉರುಸ್ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದ್ದು, ಇಲ್ಲಿಯ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಂದಾಗಿ ಉರುಸ್ ಆಚರಣೆ ಮಾಡುತ್ತಿದ್ದು, ಇದು ಭಾವ್ಯಕ್ಯತೆಯ ಸಂಕೇತದ ಉರುಸ್ ಆಗಿದೆ. 3 ದಿನಗಳ ಕಾಲ ನಡೆಯುವ ಉರುಸ್ ಕಾರ್ಯಕ್ರಮಕ್ಕೆ ಮುಸ್ಲಿಂರಷ್ಟೇ ಅಲ್ಲದೇ ಹಿಂದೂಗಳು ಕೂಡ ಭಾಗವಹಿಸಿ ಮುಸ್ಲಿಂರ ಸಾಂಪ್ರದಾಯದಂತೆ ಪೂಜೆಗೈದು ಭಕ್ತಿ ಸಮರ್ಪಿಸುತ್ತಾರೆ.ಇದೊಂದು ಐತಿಹಾಸಿಕ ಮತ್ತು ಮಾದರಿ ಉರುಸ್ ಆಗಿದೆ. ಉರುಸ್ ಅಂಗವಾಗಿ ಮಂಗಳವಾರ ಬೆಳಿಗ್ಗೆ 9ಗಂಟೆಗೆ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತ ಗ್ರಾಮಗಳಿಂದ ಸೇರಿದಂತೆ ಪಕ್ಕದ ಆಂಧ್ರದ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಈ ಸ್ಥಳದಲ್ಲಿ ಕೋರಿಕೆ ಗ