ಕಲಬುರಗಿ-ಜೇವರ್ಗಿ ಮದ್ಯದ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ್ದು ಸ್ಥಳದಲ್ಲಿಯೇ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಈರಯ್ಯ ನೆಲೋಗಿ (40) ದುರ್ಮರಣ ಹೊಂದಿದ್ದಾರೆ. ದೈನಂದಿನಂತೆ ಕೆಲಸ ಮುಗಿಸಿ ಜೇವರ್ಗಿಯಿಂದ ಕಲಬುರಗಿಗೆ ಬೈಕ್ ಮೇಲೆ ಈರಯ್ಯಾ ಅವರು ಬರುವಾಗ ಎದುಗಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಈರಣ್ಣಾ ಮೃತರಾಗಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗುರುವಾರ 5 ಗಂಟೆಗೆ ಮಾಹಿತಿ ಲಭ್ಯವಾಗಿದೆ.