ಯಡ್ರಾಮಿ ತಾಲೂಕಿನ ಸುಕ್ಷೇತ್ರ ಕಡಕೋಳ ಮಡಿವಾಳೇಶ್ವರ ಮಹಾರಥೋತ್ಸವದ ವೇಳೆ ತೇರಿನ ಆ್ಯಕ್ಸೆಲ್ ಅಕಸ್ಮಾತ್ ಮುರಿದು ಅಹಿತಕರ ಘಟನೆ ನಡೆದಿದೆ. ಪೀಠಾಧಿಪತಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದ್ದು, ಭಕ್ತರು ಭಕ್ತಿಭಾವದಿಂದ ತೇರು ಎಳೆಯುತ್ತಿದ್ದರು. ಈ ವೇಳೆ ಸುಮಾರು 20 ಮೀಟರ್ ದೂರ ಸಾಗುತ್ತಿದ್ದಂತೆ ರಥದ ಆ್ಯಕ್ಸೆಲ್ ಮುರಿದು ಬಿದ್ದು ಅಪಾಯದ ಪರಿಸ್ಥಿತಿ ನಿರ್ಮಾಣವಾಯಿತು. ಘಟನೆಯ ಬಳಿಕ ಪೊಲೀಸರು ತಕ್ಷಣ ಭಕ್ತರನ್ನು ಚದುರಿಸಿ ಸ್ಥಳವನ್ನು ಸುರಕ್ಷಿತಗೊಳಿಸಿದರು. ದೇವಸ್ಥಾನ ಸಮಿತಿಯವರು ರಥದ ಬುಡಕ್ಕೆ ಕಲ್ಲು ಮತ್ತು ಕಟ್ಟಿಗೆ ಆಧಾರವಾಗಿ ಜೋಡಿಸಿ ಬಾರಿ ಅನಾಹುತ ತಪ್ಪಿಸಿದ್ದಾರೆಂದು ಶುಕ್ರವಾರ 10 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಇನ್ನೂ ಜಾತ್ರೆ ಕಣ್ಮುಬ್ಬಿಕೊಳ್ಳಲು ಆಗಮಿಸಿದ