ಬಳ್ಳಾರಿ: ನಗರದ ಬುಡ ಕಾಂಪ್ಲೆಕ್ಸ್ ನ ಬಳಿ
ವ್ಯಕ್ತಿಯೊಬ್ಬರ ಮೃತದೇಹ ಪತ್ತೆ ; ಕೊಲೆ ಶಂಕೆ
ಬಳ್ಳಾರಿಯ ನಗರದ ಬುಡ ಕಾಂಪ್ಲೆಕ್ಸ್ ನಲ್ಲಿ ಬಳಿ ಮಂಗಳವಾರ ಬೆಳಿಗ್ಗೆ 10ಗಂಟೆಗೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಸ್ಥಳಕ್ಕೆ ಬಳ್ಳಾರಿ ಎಸ್ಪಿ ಶೋಭಾರಾಣಿ ಭೇಟಿ ಪರಿಶೀಲನೆ ನಡೆಸಿದರು. ಶವ ಬುಡ ಕಾಂಪ್ಲೆಕ್ಸ್ ನಲ್ಲಿ ಬದಿಯಲ್ಲಿಪತ್ತೆಯಾಗಿದ್ದು, ಮೃತ ವ್ಯಕ್ತಿಗೆ 30ರಿಂದ 35 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ರಾತ್ರಿ ಕುಡಿದ ಮತ್ತಿನಲ್ಲಿ ಹೊಡೆದಾಡಿ ಕೈ ಕಾಲು ಹಾಗೂ ಮುಖಕ್ಕೆ ಹೊಡೆದು ಕೊಲೆ ಮಾಡಿರುವಂತೆ ಕಂಡುಬರುತ್ತಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮೃತದೇಹವನ್ನ ವಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ಹತ್ತಿರ ಸಿಸಿ ಟಿವಿಯನ್ನು ಪೋಲಿಸರು ಪರಿಶೀಲಿಸುತ್ತಿದ್ದಾರೆ.ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.