ಕೃಷ್ಣರಾಜನಗರ: ಪಟ್ಟಣದ ಪುರಸಭೆ ವೃತ್ತದಲ್ಲಿ ತಾಲ್ಲೂಕು ಮಾದಿಗ ಸಂಘಟನೆಗಳಿಂದ ಬಾಬು ಜಗಜೀವನ್ ರಾಮ್ ಜಯಂತಿ
ಪಟ್ಟಣದ ಪುರಸಭೆ ವೃತ್ತದಲ್ಲಿ ತಾಲ್ಲೂಕು ಮಾದಿಗ ಸಂಘಟನೆಗಳಿಂದ ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಮಾಡಲಾಯಿತು. ಶಾಸಕ ಡಿ. ರವಿಶಂಕರ್ ಭಾಗವಹಿಸಿ ಜಗಜೀವನ್ ರಾಮ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಮಹನೀಯರ ಜಯಂತಿ ಆಚರಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಡಾ. ಬಾಬು ಜನಜೀವನ್ ರಾಮ್ ಅವರು ಅಭಿವೃದ್ಧಿ ಹರಿಕಾರರು ಹಾಗಾಗಿ ಅವರ ಸಾಧನೆಯ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು. ಈ ವೇಳೆ ತಾಲ್ಲೂಕು ಮಾದಿಗ ಸಂಘದ ಪದಾಧಿಕಾರಿಗಳು ಇದ್ದರು.