ಬಳ್ಳಾರಿ ನಗರದ ಪ್ರತಿಷ್ಠಿತ ಬೆಂಗಳೂರು ರಸ್ತೆಯಲ್ಲಿರುವ ಮುರಾರಿ ಹಾರ್ಡ್ವೇರ್ ಶಾಪ್ ನಲ್ಲಿ ಮಂಗಳವಾರ ತಡರಾತ್ರಿ 1:30ಕ್ಕೆ ಕಳ್ಳತನ ನಡೆದಿದೆ. ಮೂರಂತಸ್ಥಿನ ಕಟ್ಟಡದ ಮೇಲ್ಬಾಗದಿಂದ ಬಂದ ಖದೀಮರು ಅಂಗಡಿಯೊಳಗೆ ಇಟ್ಟಿದ್ದ ಒಂದು ಲಕ್ಷ ರೂಪಾಯಿ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಮುಖಕ್ಕೆ ಟವೆಲ್ ಸುತ್ತಿಕೊಂಡು ಬಂದಿದ್ದ ಖದೀಮರು ಕಣ್ಣಿಗೆ ಚಾಳೀಸು ಹಾಕಿಕೊಂಡು ಬಂದು ಒಳಗೆ ನುಗ್ಗಿದ್ದಾರೆ. ಕೆಲವು ಕಡೆ ಇರೋ ಸಿಸಿ ಕ್ಯಾಮರಕ್ಕೂ ಬಟ್ಟೆಗಳನ್ನು ಸುತ್ತಿದ ಹಿನ್ನೆಲೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎನ್ನಲಾಗ್ತಿದೆ. ಸ್ಥಳಕ್ಕೆ ಶ್ವಾಸನಾಳ ಮತ್ತು ಪೊಲೀಸರು ಬಂದು ತಪಾಸಣೆ ಮಾಡ್ತಿದ್ದಾರೆ.