ಬಳ್ಳಾರಿ: 54ಲಕ್ಷ ವಂಚನೆ, ನಗರದ ನಿವೃತ್ತ ಸಬ್ ರಿಜಿಸ್ಟರ್ ಆಫೀಸರ್ ಸೈಬರ್ ಬಲಿ.
ಬಳ್ಳಾರಿ ಜಿಲ್ಲೆಯಲ್ಲಿ ಟೆಲಿಕಾಂ, ಪೊಲೀಸ್, ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ವಾಟ್ಸಾಪ್ ಕರೆ, ವಿಡಿಯೋ ಕಾಲ್ ಮೂಲಕ ನಿವೃತ್ತ ಸಬ್ ರಿಜಿಸ್ಟ್ರಾರ್ ಅಧಿಕಾರಿ ವಿ.ಇ. ಗಂಗಾಧರ್ ಅವರಿಗೆ 54 ಲಕ್ಷ ರೂ. ವಂಚನೆ ಮಾಡಲಾಗಿದೆ. ಅಕ್ಟೋಬರ್ 31 ರಿಂದ ನವೆಂಬರ್ 4, 2025 ರ ಅವಧಿಯಲ್ಲಿ ನಡೆದ ಈ ಘಟನೆಯಲ್ಲಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ದುರ್ಬಳಕೆ, 200 ಕೋಟಿ ವಂಚನೆ, ಅಶ್ಲೀಲ ಸಂದೇಶಗಳ ಆರೋಪ ಮಾಡಿ, ಹಣ ಡೆಪಾಸಿಟ್ ಮಾಡದಿದ್ದರೆ ಬಂಧಿಸುವುದಾಗಿ ಬೆದರಿಸಿ, ಹಂತ ಹಂತವಾಗಿ 21 ಲಕ್ಷ, 6 ಲಕ್ಷ, 27 ಲಕ್ಷ ರೂ. ಪಡೆದು ವಂಚಿಸಲಾಗಿದೆ.ಈ ಕುರಿತು ಬಳ್ಳಾರಿ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಂದು ಸೈಬರ್ ಅಧಿಕಾರಿಗಳು ಮಂಗಳವಾರ ಸಂಜೆ 7ಗಂಟೆಗೆ ಮಾಹಿತಿ ನೀಡಿದ್ದಾರೆ.