ಬಳ್ಳಾರಿ: ಎ.ಸಿ, ಸ್ವಾಮೀಜಿ ಮೇಲೆ 'ಲೋಕಾ' ಕೇಸು
₹40 ಕೋಟಿಗೂ ಮಿಗಿಲಾದ ಇನಾಮ್ ಜಮೀನಿನ ಹಕ್ಕು ಅಕ್ರಮ ಬದಲಾವಣೆ ಆರೋಪ
ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ಶ್ರೀಧರ ಗಡ್ಡೆ ಗ್ರಾಮದ, ಇನಾಂ ಭೂಮಿಯ ಹಕ್ಕನ್ನು ಅಕ್ರಮವಾಗಿ ಬದಲಾವಣೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಉಪವಿಭಾಗಾಧಿಕಾರಿ (ಎಸಿ), ಇಬ್ಬರು ಸ್ವಾಮೀಜಿ ಮತ್ತು ಅಮಾನತುಗೊಂಡಿರುವ ತಹಶೀಲ್ದಾರ್ ವಿರುದ್ಧ ಲೋಕಾಯುಕ್ತ ಬಳ್ಳಾರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಳ್ಳಾರಿಯ ಎ.ಸಿ ಆಗಿ ಕಾರ್ಯನಿರ್ವಹಿಸುತ್ತಿರುವ ಪಿ. ಪ್ರಮೋದ್, ಬಳ್ಳಾರಿಯಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ, ಸದ್ಯ ಅಮಾನತಿನಲ್ಲಿರುವ ಎಚ್.ವಿಶ್ವನಾಥ್, ಬಳ್ಳಾರಿಯ ಕೊಟ್ಟೂರು ಸ್ವಾಮಿ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿಗೆ ಸದ್ಯ ತನಿಖೆ ಭೀತಿ ಎದುರಾಗಿದೆ. ಮಠದ ಈ ಹಿಂದಿನ ಪೀಠಾಧ್ಯಕ್ಷರಾಗಿದ್ದ ದಿವಂಗತ ಸಂಗನಬಸವಸ್ವಾಮೀಜಿ ಅವರನ್ನು ಪ್ರಕರಣದಲ್ಲಿ ಎರಡನೇ ಆರೋಪಿಯನ್ನಾಗ