ಕೊಳಾಳ್ ಗ್ರಾಮದಲ್ಲಿ ಹೊಸಕೆರೆ ಗೋಕಟ್ಟೆ ನಿರ್ಮಾಣಕ್ಕೆ ಶಾಸಕ ಎಂ ಚಂದ್ರಪ್ಪ ಚಾಲನೆ ನೀಡಿದ್ದಾರೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಹೊಳಲ್ಕೆರೆ ಮತಕ್ಷೇತ್ರದ ಕೊಳಾಳ್ ಗ್ರಾಮದಲ್ಲಿ ₹1 ಕೋಟಿ ವೆಚ್ಚದಲ್ಲಿ ಕೊಳಾಳು ಗ್ರಾಮದ ಹತ್ತಿರ ಹೊಸಕೆರೆ ಗೋಕಟ್ಟೆ ನಿರ್ಮಾಣ ಕಾಮಗಾರಿಗೆ ಇಂದು ಭೂಮಿಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದ್ದು ಆದಷ್ಟು ಬೇಗ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿ ಮುಗಿಸುವಂತೆ ಇಲಾಖೆ ಅಧಿಕಾರಿಗಳಿಗೆ ಶಾಸಕ ಎಂ ಚಂದ್ರಪ್ಪ ಸೂಚನೆ ನೀಡಿದ್ದಾರೆ