ಕಾಳಗಿ ತಾಲೂಕಿನ ಮಾಡಬೂಳ ಗ್ರಾಮದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ನೂತನ ಪ್ರಾಣಿ ಸಂಗ್ರಹಾಲಯಕ್ಕೆ ಮಾಜಿ ಅರಣ್ಯ ಇಲಾಖೆ ವಲಯಾಧಿಕಾರಿ ಹನಮಂತಪ್ಪ ಗಾರಂಪಳ್ಳಿ ಅವರ ಹೆಸರನ್ನು ಇಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಈ ಕುರಿತು ನಗರದಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಮಾತನಾಡಿದ ನಿವೃತ್ತ ವಲಯಾಧಿಕಾರಿ ಹನಮಂತಪ್ಪ ಗಾರಂಪಳ್ಳಿ ಅವರು, ತಾವು 1970ರಲ್ಲಿ ಅರಣ್ಯ ಇಲಾಖೆಯ ಸೇವೆಗೆ ಸೇರ್ಪಡೆಯಾಗಿ, ಸೇವಾವಧಿಯಲ್ಲಿ ಅನೇಕ ಅಭಿವೃದ್ಧಿಪರ ಹಾಗೂ ಸಂರಕ್ಷಣಾತ್ಮಕ ಕಾರ್ಯಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು. ಕೊಂಚಾವರಂ ಪ್ರದೇಶದಲ್ಲಿ ಸಾಗುವನಿ ಮರಗಳ ಕಳ್ಳತನ ಪ್ರಕರಣದ ವೇಳೆ ಕಳ್ಳರ ವಿರುದ್ಧ ಫೈರಿಂಗ್ ನಡೆಸಿ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದನ್ನು ಅವರು ಸ್ಮರಿಸಿದರು. ಅಲ್ಲದೆ ಸದ್ಯ ಪ್ರಾಣಿ