ಬಳ್ಳಾರಿ: ನಗರದ ಅಲ್ಲಿಪುರ ಬಳಿ ಇರುವ
ಹೆಚ್ಎಲ್ ಸಿ ಕಾಲುವೆಗೆ ಉರುಳಿದ್ದ ಕಾರ್;
ಎರಡು ದಿನಗಳ ಕಾರ್ಯಾಚರಣೆ ಬಳಿಕ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ
ನಗರದ ಅಲ್ಲಿಪುರ ಬಳಿ ಇರುವ ಹೆಚ್ಎಲ್ಸಿ ನಾಲೆಯಲ್ಲಿ ಶನಿವಾರ ಸಂಜೆ ಕಾರ್ ತೊಳಿಯಲು ಹೋಗಿದ್ದ ಸಂದರ್ಭದಲ್ಲಿ ಕಾರು ನಾಲೆಗೆ ಉರುಳಿ ನೀರಿನ ರಭಸಕ್ಕೆ ತೇಲಿಕೊಂಡು ಮುಂದಕ್ಕೆ ಹೋಗಿದೆ. ಈ ಸಂಬಂಧ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ವಿಎಸ್ಕೆ ವಿಶ್ವವಿದ್ಯಾಲಯ ಪಕ್ಕದಲ್ಲಿ ಹಾದು ಹೋಗಿರುವ ಕಾಲುವೆಯಲ್ಲಿ ಬಿಳಿ ಬಣ್ಣದ ಕಾರು ತೇಲುತ್ತಾ ಸ್ವಲ್ಪ ದೂರ ಸಾಗಿ, ಬಳಿಕ ಮುಳುಗುವುದು ವಿಡಿಯೊದಲ್ಲಿದೆ. ಈ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾರನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದರು.