ಕಲಬುರಗಿ ಮಹಾನಗರ ಪಾಲಿಕೆಯಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಪ್ರಾರಂಭಿಸಲಾಗಿದೆ. ಈ ಮೂಲಕ 2002ರಲ್ಲಿ ದಾಖಲಾಗಿದ್ದ ಮತದಾರರನ್ನು ಗುರುತಿಸಿ ಮತದಾರರ ಮ್ಯಾಪಿಂಗ್ ಹಾಗೂ ಪ್ರೊಜಿನಿ ಕಾರ್ಯವನ್ನು ಪೂರ್ಣಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜ.16 ಮತ್ತು 17ರಂದು ಮತಗಟ್ಟೆ ಹಂತದ ಅಧಿಕಾರಿಗಳು (ಬಿಎಲ್‌ಓ) ಮನೆಮನೆಗೆ ಭೇಟಿ ನೀಡಲಿದ್ದಾರೆ. ಅವರು ಬಂದಾಗ ಸಾರ್ವಜನಿಕರು ಅಗತ್ಯ ಮಾಹಿತಿಯನ್ನು ನೀಡುವ ಮೂಲಕ ಸಹಕರಿಸಬೇಕೆಂದು ಮೇಯರ್ ವರ್ಷಾ ಜಾನೆ ಮನವಿ ಮಾಡಿದ್ದಾರೆ. ಬಿಎಲ್‌ಓಗಳು ಮನೆಗೆ ಭೇಟಿ ನೀಡಿದಾಗ, ಹಿಂದೆ ಮತದಾನ ಮಾಡಿದ ಬಗ್ಗೆ ಮತದಾರರ ಗುರುತಿನ ಚೀಟಿ, ಮತಗಟ್ಟೆ ಹೆಸರು ಹಾಗೂ ಮತದಾನ ಮಾಡಿದ ಸ್ಥಳದ ವಿವರಗಳನ್ನು ಒದಗಿಸುವಂತೆ ಗುರುವಾರ 9 ಗಂಂಟೆಗೆ ಮಾತನಾಡಿದ ಅವ