ಬಳ್ಳಾರಿ: ನಗರದ ಬಾಲಮಂದಿರ ಸೇರಿದ ಬಾಲಕ; ಪಾಲಕರ ಪತ್ತೆಗೆ ಮನವಿ
ನಗರದ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ನ.01 ರಂದು ರಕ್ಷಣೆ ಮಾಡಿ ದಾಖಲಿಸಿಕೊಂಡ ಮೈಲಾರಜ್ಜ ತಂದೆ ಅರುಣ್(ವರುಣ್) ಎನ್ನುವ 10 ವರ್ಷದ ಬಾಲಕನು ತನ್ನ ವಿಳಾಸವನ್ನು ಹಳೇ ಹುಬ್ಬಳ್ಳಿಯ ಸಿದ್ಧರೂಢ ಮಠದ ಹತ್ತಿರದ ಹತ್ತಿಪೇಟೆ ಎಂದು ಹೇಳುತ್ತಿದ್ದು, ಸ್ಪಷ್ಠ ವಿಳಾಸ ತಿಳಿಸುತ್ತಿಲ್ಲ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಬಾಲಕನ ಪೋಷಕರ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿಯ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಮಂಗಳವಾರ ಸಂಜೆ 4ಗಂಟೆಗೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಬಾಲಕ ಚಹರೆ: ಎತ್ತರ 128 ಸೆಂ.ಮೀ., ತೂಕ 24.5 ಕೀ.ಗ್ರಾಂ., ಕಪ್ಪು ಮೈ ಬಣ್ಣ, ಬಲಗೈ ಸಣ್ಣ ಪುಟ್ಟ ಗಾಯದ ಗುರುತು, ಬಾಲಕ ದೊರೆತಾಗ ಕೆಂಪು ಬಣ್ಣ ಟೀ-ಶರ್ಟ್, ನೀಲಿ ಬಣ್ಣದ ಚಡ್ಡಿ, ಹಳದಿ ಬಣ್ಣ ಜೋಳಿಗೆ ಹಾಗೂ ಕರಿ ಕಂಬಳಿ ಧರಿಸಿ