ಶಿವಮೊಗ್ಗದ ನಗರದ ಸಮೀಪದಲ್ಲಿರುವ ಬಂಗಾರಪ್ಪ ಬಡಾವಣೆಯಲ್ಲಿ ಶನಿವಾರ ಗಣಪತಿ ಹಾಗೂ ನಾಗದೇವರ ವಿಗ್ರಹ ಕಿತ್ತು ಹಾಕಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಾಸಕ ಎಸ್.ಎನ್.ಚನ್ನಬಸಪ್ಪ ಹಾಗೂ ಹಿಂದೂಪರ ಸಂಘಟನೆಯ ಮುಖಂಡರು ಶನಿವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಮಹಿಳೆಯರು ಶಾಸಕರ ಕಾಲಿಗೆ ಬಿದ್ದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಇನ್ನ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕ ಚನ್ನಬಸಪ್ಪ ಅವರು ಪೋಲಿಸ್ ಅಧಿಕಾರಿಗಳು ಹಾಗೂ ದೂರವಾಣಿ ಕರೆ ಮೂಲಕ ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಅವರಿಗೆ ತಿಳಿಸಿದರು.