ಮುಂಡಗೋಡ :ಪಟ್ಟಣದ ಪೀಟೋಪಕರಣದ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ಅನಾಹುತದಿಂದಾಗಿ ಲಕ್ಷಾಂತರರೂ. ಮೌಲ್ಯದ ಕಟ್ಟಿಗೆ, ಫರ್ನಿಚರ್ ಗಳು ಹಾಗೂ ಮಷೀನಗಳು ಸುಟ್ಟು ಭಸ್ಮವಾದ ಘಟನೆ ಭಾನುವಾರ ಬೆಳಗಿನಜಾವ ಮುಂಡಗೋಡನ ಕಿಲ್ಲೆ ಓಣಿಯಲ್ಲಿ ಸಂಭವಿಸಿದೆ. ಕಿಲ್ಲೆ ಓಣಿಯ ಯೂನುಸ್ ಹೊಸಕೊಪ್ಪ ಎಂಬುವವರಿಗೆ ಸೇರಿದ ಪೀಟೋಪಕರಣದ ಮಳಿಗೆ ಹಾಗೂ ಅಯಾನ್ ಹಾನಗಲ್ ಎಂಬುವವರಿಗೆ ಸೇರಿದ ಹಾರ್ಡವೇರ್ ಮಳಿಗೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ತಗಲಿ ಹಾನಿಯಾಗಿದೆ.ಬೆಂಕಿ ಅವಘಡವಾದ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದು,ಹೆಚ್ಚಿನ ಪ್ರಮಾಣದ ಅನಾಹುತ ತಪ್ಪಿದಂತಾಗಿದೆ .