ಕಾಳಗಿ ತಾಲೂಕಿನ ರೇವಗಿ ರೇವಣಸಿದ್ದೇಶ್ವರ ಗುಡ್ಡದ ಬಳಿ ಟಂಟಂ ಪಲ್ಟಿ ವಿದ್ಯಾರ್ಥಿನಿಯರು ಸೇರಿ ಎಂಟು ಜನರಿಗೆ ಗಾಯವಾದ ಘಟನೆ ನಡೆದಿದೆ. 65 ವರ್ಷದ ಬಸಮ್ಮ ಮತ್ತು 15 ವರ್ಷದ ಪ್ರಿಯಾಂಕ್ ಗಂಭೀರವಾಗಿ ಗಾಯಗೊಂಡಿದ್ದು ಕಲ್ಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದರಂತೆ ಪಿಯುಸಿ ವಿದ್ಯಾರ್ಥಿನಿ ಸುಮಿತ್ರಾ ಚೌಹಾನ್, ಗೀತಾ ರಾಥೋಡ್ ಸೇರಿ ಹಲವು ವಿದ್ಯಾರ್ಥಿಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ ಎಂದು ಗುರುವಾರ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ..