ಜಗಳೂರು ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ಅಳವಡಿಸಿದ ಆಂಗ್ಲ ನಾಮಫಲಕ ತೆರವುಗೊಳಿಸುವಂತೆ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಲೋಕ್ಯ ನಾಯಕ್ ಮಾಧ್ಯಮದ ಮೂಲಕ ತಿಳಿಸಿದ್ದರೆ. ಇದೇ ವೇಳೆ ಮಾತನಾಡಿದ ಅವರು ಜಿಲ್ಲಾಧಿಕಾರಿ ಆದೇಶದಂತೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಯಾಗಿರಬೇಕು. ಇಲ್ಲದಿದ್ದರೆ ತೆರವು ಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಕೆಲವು ಅಂಗಡಿ ಮಾಲಿಕರು ಸ್ವಯಂ ಪ್ರೇರಿತರಾಗಿ ತೆರವು ಗೊಳಿಸಿದ್ದು ಇನ್ನೂ ಕೆಲವು ಭಾಗಗಳಲ್ಲಿ ಸಿಬ್ಬಂದಿ ತೆರವು ಗೊಳಿಸಿದ್ದಾರೆ. ಇನ್ನೂ ಬೆರಳೆಣಿಕೆಯಷ್ಟು ಅಂಗಡಿಗಳ ಮೇಲೆ ಆಂಗ್ಲ ಭಾಷೆಯಲ್ಲಿ ನಾಮಫಲಕ ಇದ್ದು ಕೂಡಲೇ ತೆರವುಗೊಳಿಸದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದ್ದರೆ.