ಬಳ್ಳಾರಿ: ತಾಲ್ಲೂಕಿನ ವಣೇನೂರು ಗ್ರಾಮದ
ಮಹಿಳೆ ಕಾಣೆ: ಪತ್ತೆಗೆ ಪೋಲಿಸರು ಮನವಿ
ತಾಲ್ಲೂಕಿನ ವಣೇನೂರು ಗ್ರಾಮದ 33 ವರ್ಷದ ಹೆಚ್.ಎಂ ಜಯಶ್ರೀ ಎನ್ನುವ ಮಹಿಳೆಯು ಕಾಣೆಯಾಗಿರುವ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಕಾಣೆಯಾದ ಮಹಿಳೆಯ ಚಹರೆ: ಎತ್ತರ 4 ಅಡಿ, ಗೋಧಿಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಟಾಪ್, ಕೆಂಪು ಬಣ್ಣದ ನೈಟಿ, ಬಿಳಿ ಮತ್ತು ಕೆಂಪು ವೇಲು ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ. ಮೇಲ್ಕಂಡ ಚಹರೆಯುಳ್ಳ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಎಸ್.ಪಿ ಕಚೇರಿ ಅಥವಾ ಮೋಕಾ ಪೊಲೀಸ್ ಠಾಣೆಯ ಸಂಪರ್ಕಿಸಬಹುದು ಎಂದು ಸೋಮವಾರ ಮಧ್ಯಾಹ್ನ 4ಗಂಟೆಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.